ಪ್ರೀತಿಯ ಗೆಳತಿಗೇ ಒಂದು ಪತ್ರ
ಪ್ರೀತಿಯ ಗೆಳತಿಗೇ .... ನಾನು ನಿನಗೆ ಈ ಪತ್ರ ಬರೆಯುವುದು ಕೂಡಾ ತಪ್ಪೇ ಇರಬಹುದು. ಆದರೆ ಈ ಮನಸ್ಸಿನ ಭಾರವನ್ನು ಹೊತ್ತುಕೊಂಡು ಸುಮ್ಮನೆ ಬದುಕುವುದಕ್ಕಿಂತ, ಅದನ್ನು ಹಂಚಿಕೊಳ್ಳುವುದು ಸೂಕ್ತವೆಂದು ಈ ಪತ್ರ ಬರೆಯುತ್ತಿದ್ದೇನೆ. ಬರೆದ ಈ ಪತ್ರ ನಿನಗೆ ಕೊಡಬಾರದು ಎಂದು ನನಗೆ ನಾನು ಮಾಡಿಕೊಂಡ ಆಣೆಯೊಂದಿಗೆ. ನಾ ನಿನ್ನ ನೋಡಿದ್ದು ಅದೇ ಮೊದಲ ಸಲವಲ್ಲ. ಹಾಗಾಗೀ ನನ್ನದು ಮೊದಲ ನೋಟದ ಪ್ರೀತಿ ಎನ್ನುವುದು ಸೂಕ್ತವಲ್ಲ.ಆ ಸುಂದರ ಶುಭ ದಿನದಂದು ಎದುರಿನಿಂದ ಫೋನಿನಲ್ಲಿ ಮಾತಾಡುತ್ತಾ ಬರುತಿದ್ದ ನಿನ್ನ್ ತೆಳುವಾದ ದೇಹಕ್ಕೆ ಅಪ್ಪಿಕೊಂಡ ಆ ಕಪ್ಪು ಸೀರೆ, ನಿನ್ನ್ ಹೊಳೆಯುವ ಕಣ್ಣುಗಳ ಕೊಂಚ ಮರೆಮಾಡಲು ನಿನ್ನ್ ಮೂಗಿನ ಮೇಲೆ ಗತ್ತಿನಿಂದ ಕುಳಿತ ಕನ್ನಡಕ, ಕೈಗೆ ಸುತ್ತಿದ ಲೆದರ್ ಬೆಲ್ಟಿನ ಬಂಗಾರ ಬಣ್ಣದ ಕೈ ಗಡಿಯಾರ, ಸುಮ್ಮನೆ ಬಾಚಿ ಬಿಟ್ಟ ನಿನ್ನ ಹೇರಳ ರಾಶಿ ಆಕಸ್ಮಿಕವಾಗಿನೋಡಿದ ಕ್ಷಣದಿಂದಲೇ ನನ್ನ ಹೊಟ್ಟೆಯಲ್ಲಿ ಚಿಟ್ಟೆ ಹಾರಿದ ಅನುಭವ. ಆಮೇಲೆ ಶುರು ಆಯ್ತು ನೋಡು ಕದ್ದು, ಕಾಯ್ದು... ಮಿಂಚಿನಂಥ ನಿನ್ನ ನಗು, ಮಳೆಯಂಥ ನಿನ್ನ ಮಾತು, ಅಲೆಗಳಂಥ ನಿನ್ನ ನಡಿಗೆ ನೋಡುವ ಹುಚ್ಚು. ನಿನ್ನ ಕಣ್ಣಿಗೆ ಬೀಳಬೇಕೆಂಬ ಹಂಬಲ. ನನಗನಿಸುತ್ತೆ ಆಗಲೆ ನನ್ನಲಿ ಈ ಹೇಳಿಕೊಳ್ಳದ ಅನಾಹುತಕಾರಿ ಪ್ರೀತೀ ಹುಟ್ಟಿದ್ದು ಮತ್ತೆ ಈ ಎಲ್ಲವೂ ನನ್ನನ್ನು ಆವರಿಸಿದಾಗ ಈಗ ಹಿಂದೆ ಸರಿಯೂದು ಅಸಾಧ್ಯ ಅನಿಸೂಕೆ ಶುರುವಾಗಿದ್ದು ಅಂತ.ಆದರೆ ನಂಗೊತ್ತು ಕ...