ನೀನೆಂದಿಗೂ ಜೀವಂತ
ನೀ ನನ್ನ ಬಿಟ್ಟು ಹೋಗಿರುವೆ.
ಎಲ್ಲಿ ತಲುಪಿರುವೆ?
ನಿನ್ನ ನಗುವು ಇನ್ನೂ
ನನ್ನ ಕಣ್ಣ ಮುಂದೆ ಅರಳುತ್ತಿದೆ.
ನಿನ್ನ ಧ್ವನಿ ಈ ಖಾಲಿ ಮನೆಯಲ್ಲಿ
ಇನ್ನು ಪ್ರತಿಧ್ವನಿಸುತ್ತಿದೆ.
ನೀ ಪರಿಚಯಿಸಿದ ಪ್ರೀತಿಯ ಬೆಳಕೇ,
ಇಂದು ಕತ್ತಲಲೀ ನನ್ನ ದಾರಿ ತೋರಿಸುತಿದೆ.
ನಿನ್ನ ನೆನಪೇ ಉಸಿರಾಗಿ,
ನನ್ನ ಬದುಕಿಗೆ ಇಂದು ಆಸರೆಯಾಗಿದೆ.
ನೀ ಇರಬೇಕಿತ್ತು,
ಆದರೆ ಇಲ್ಲ…
ತಡಿ ನೀನು ಎಲ್ಲಿರುವೆಯೋ
ಬರುವೇ ನಾನು ಅಲ್ಲಿ…
ಅಲ್ಲಿಯತನಕ
ಈ ಉಸಿರಿನಲಿ,
ಈ ಮನದಲಿ,
ನೀನೆಂದಿಗೂ ಜೀವಂತ!
- ಶಿವಾನಂದ್ ಸಾವಳಗೀಕರ್
Comments
Post a Comment