ಪ್ರೀತಿಯ ಗೆಳತಿಗೇ ಒಂದು ಪತ್ರ

 ಪ್ರೀತಿಯ ಗೆಳತಿಗೇ ....

ನಾನು ನಿನಗೆ ಈ ಪತ್ರ ಬರೆಯುವುದು ಕೂಡಾ ತಪ್ಪೇ ಇರಬಹುದು. ಆದರೆ ಈ ಮನಸ್ಸಿನ ಭಾರವನ್ನು ಹೊತ್ತುಕೊಂಡು ಸುಮ್ಮನೆ ಬದುಕುವುದಕ್ಕಿಂತ, ಅದನ್ನು ಹಂಚಿಕೊಳ್ಳುವುದು ಸೂಕ್ತವೆಂದು ಈ ಪತ್ರ ಬರೆಯುತ್ತಿದ್ದೇನೆ. 

ಬರೆದ ಈ ಪತ್ರ ನಿನಗೆ ಕೊಡಬಾರದು ಎಂದು ನನಗೆ ನಾನು ಮಾಡಿಕೊಂಡ ಆಣೆಯೊಂದಿಗೆ.

ನಾ ನಿನ್ನ ನೋಡಿದ್ದು ಅದೇ ಮೊದಲ ಸಲವಲ್ಲ. ಹಾಗಾಗೀ ನನ್ನದು ಮೊದಲ ನೋಟದ ಪ್ರೀತಿ ಎನ್ನುವುದು ಸೂಕ್ತವಲ್ಲ.ಆ ಸುಂದರ ಶುಭ ದಿನದಂದು ಎದುರಿನಿಂದ ಫೋನಿನಲ್ಲಿ ಮಾತಾಡುತ್ತಾ ಬರುತಿದ್ದ ನಿನ್ನ್ ತೆಳುವಾದ ದೇಹಕ್ಕೆ ಅಪ್ಪಿಕೊಂಡ ಆ ಕಪ್ಪು ಸೀರೆ, ನಿನ್ನ್ ಹೊಳೆಯುವ ಕಣ್ಣುಗಳ ಕೊಂಚ ಮರೆಮಾಡಲು ನಿನ್ನ್ ಮೂಗಿನ ಮೇಲೆ ಗತ್ತಿನಿಂದ ಕುಳಿತ ಕನ್ನಡಕ, ಕೈಗೆ ಸುತ್ತಿದ ಲೆದರ್ ಬೆಲ್ಟಿನ ಬಂಗಾರ ಬಣ್ಣದ ಕೈ ಗಡಿಯಾರ, ಸುಮ್ಮನೆ ಬಾಚಿ ಬಿಟ್ಟ ನಿನ್ನ ಹೇರಳ ರಾಶಿ ಆಕಸ್ಮಿಕವಾಗಿನೋಡಿದ ಕ್ಷಣದಿಂದಲೇ ನನ್ನ ಹೊಟ್ಟೆಯಲ್ಲಿ ಚಿಟ್ಟೆ ಹಾರಿದ ಅನುಭವ. 

ಆಮೇಲೆ ಶುರು ಆಯ್ತು ನೋಡು ಕದ್ದು, ಕಾಯ್ದು... ಮಿಂಚಿನಂಥ ನಿನ್ನ ನಗು, ಮಳೆಯಂಥ ನಿನ್ನ ಮಾತು, ಅಲೆಗಳಂಥ ನಿನ್ನ ನಡಿಗೆ ನೋಡುವ ಹುಚ್ಚು. ನಿನ್ನ ಕಣ್ಣಿಗೆ ಬೀಳಬೇಕೆಂಬ ಹಂಬಲ.

 ನನಗನಿಸುತ್ತೆ ಆಗಲೆ ನನ್ನಲಿ ಈ ಹೇಳಿಕೊಳ್ಳದ ಅನಾಹುತಕಾರಿ ಪ್ರೀತೀ ಹುಟ್ಟಿದ್ದು ಮತ್ತೆ ಈ ಎಲ್ಲವೂ ನನ್ನನ್ನು ಆವರಿಸಿದಾಗ ಈಗ ಹಿಂದೆ ಸರಿಯೂದು ಅಸಾಧ್ಯ ಅನಿಸೂಕೆ ಶುರುವಾಗಿದ್ದು ಅಂತ.ಆದರೆ ನಂಗೊತ್ತು ಕಣೇ, ಈ ಪ್ರೀತಿ ಒಂದು ದಡದ್ದು. ನನ್ನ ನಿನ್ನ ನಡುವೆ ಇರುವ ನಿನ್ನ ಕೊರಳ ಆವರಿಸಿದ ಆತ ಕಟ್ಟಿದ ಮಂಗಳಸೂತ್ರದ ನದಿ ದಾಟಿ ಆ ದಡಕ್ಕೆ ಬರೋದು ಅಸಾಧ್ಯ ಮತ್ತೂ ಅನೈತಿಕ ಎಂದು.

ನಿನ್ನ ಬದುಕು - ಭಾಗ್ಯ ಈಗಾಗಲೇ ಮತ್ತೊಬ್ಬನದು. ನಾನು ಕೇವಲ ಹೃದಯದಲ್ಲಿ ವ್ಯಕ್ತ ಪಡಿಸದ ಪ್ರೀತಿಯ ದೀಪ ಹಚ್ಚಿಕೊಂಡು ಬದುಕಬಹುದು, ಅದಲ್ಲದೆ ಮತ್ತೇನು ಮಾಡಲು ಸಾಧ್ಯ ಅಲ್ಲವೇ ಗೆಳತೀ.

Actually ನಾನು ಈ ಭಾವನೆಗಳನ್ನು ನಿನಗೆ ಬರಿಯುವುದು ಅಸಂಬದ್ಧ. ಆದರೆ ಈ ಮೌನದ ಜತೆ ನಾನು ಬದುಕಲು ಸಾಧ್ಯವಾಗುತ್ತಿಲ್ಲ. ನನ್ನ ಪ್ರೀತಿ ನಿನಗೆ ತಿಳಿಸಬೇಕೆಂಬ ಹಂಬಲವಿಲ್ಲ, ನೀನು ಎಂದಾದರೂ ತಿಳಿದು ಕೊಳ್ಳುತ್ತಿಯೆಂಬ ಆಸೆ ಕೂಡಾ ಇಲ್ಲ. 

ನೀನು ಸುಖವಾಗಿರು, ಸಂತೋಷವಾಗಿರು— ನನ್ನ ಹೃದಯ ದಲ್ಲಿ ಚಿಗುರಿದ ಕನಸುಗಳನ್ನು, ಆಸೆ ಗಳನು ದಫನು ಮಾಡಿ ಬಿಡುವೆ ಪರ್ವಾಗಿಲ್ಲ ಬಿಡು.

ನಿನ್ನ ಜೀವನದಲ್ಲಿ ನಾನು ಕೇವಲ  ದಾರಿಯಲ್ಲಿರುವ ಒಂದು ಮರದ ನೆರಳು. ಒಂದಲ್ಲ ಒಂದು ದಿನ ಈ ದಾರಿಯಲಿ ನೀ ನಡೆದು ಬರಬಹುದೇನೋ, ಆ ಪ್ರೀತಿಯ ನೆರಳಲಿ ಕ್ಷಣ ನಿಂತು ದಣಿವಾರಿಸಿಕೊಳ್ಳುವಿಯೆನೋ ಎಂಬ ಅಸಾಧ್ಯ ಆಸೆ.


ನಿನ್ನ ಬರುವಿಕೆಗೆ ಕಾಯುತ್ತಿರುವ 

ನಿನ್ನವನಲ್ಲದ ನಿನ್ನವ 

@ssavalgikar  #article #love #lovestory #everyone #follower #postoftheday

Comments

Popular posts from this blog

Women's Day 2025

ಅವಳಿಗಾಗಿ