My Night's
There’s something strangely comforting about working at night,
ಜನರೆಲ್ಲರೂ ನಿದ್ರೆಗೆ ಜಾರಿದಾಗ, ಸದ್ದುಗದ್ದಲ ಮೆಲ್ಲ ಮೆಲ್ಲನೆ ಕರಗಿ ಹೋದಾಗ ಒಂದು ಅವ್ಯಕ್ತ ನೆಮ್ಮದಿ ನನ್ನ ಆವರಿಸಿಬಿಡುತ್ತದೆ.
ದಿನದ ವೇಳೆಯಲ್ಲಿ ಕಳೆದುಹೋದದ್ದನ್ನು ಹುಡುಕಲು ನನಗೆ ರಾತ್ರಿಗಳೇ ಸಹಾಯ ಮಾಡುತ್ತವೆ.
ಆದರೆ ಒಂದು ಮಾತು ಹೇಳಲೇಬೇಕು Work from home ಎಂಬ ವರದಾನದೊಂದಿಗೆ ರಾತ್ರಿ ಕೆಲಸ ಮಾಡುವುದು ನನ್ನ ಆದ್ಯತೆ ಮತ್ತು ಇಚ್ಛೆಯೇನಲ್ಲ.
ನಿದ್ರೆ ತ್ಯಾಗ ಮಾಡಿ ಕನಸುಗಳನ್ನು ನನಸು ಮಾಡಿಕೊಳ್ಳಬೇಕಾಗಿದ್ದು ವಿಪರ್ಯಾಸವೇ ಸರಿ.
ಆದರೆ ಈ ಕತ್ತಲಿನ ನಡುವೆ ಒಂಥರದ ಸ್ವಾತಂತ್ರ್ಯದ ಅನುಭೂತಿಯೊಂದಿಗೆ ಕೇಳಿಸಿಕೊಳ್ಳಲು ನನ್ನ ಮೆಚ್ಚಿನ Podcast ಮತ್ತು ಸಂಗೀತ ಇರುತ್ತವೆ, ನನ್ನ ಯೋಚನೆಗಳು ಸ್ಪಷ್ಟವಾಗಿ ಹರಿದುಬರುತ್ತವೆ, ಹೃದಯದ ಜೊತೆಗೆ ಕೆಲಸ ಕೂಡ ಸ್ವಲ್ಪ ಹಗುರವಾಗುತ್ತದೆ.
- ಶಿವಾನಂದ್ ಸಾವಳಗಿಕರ್
Comments
Post a Comment