Posts

ಪ್ರೀತಿಯ ಗೆಳತಿಗೇ ಒಂದು ಪತ್ರ

 ಪ್ರೀತಿಯ ಗೆಳತಿಗೇ .... ನಾನು ನಿನಗೆ ಈ ಪತ್ರ ಬರೆಯುವುದು ಕೂಡಾ ತಪ್ಪೇ ಇರಬಹುದು. ಆದರೆ ಈ ಮನಸ್ಸಿನ ಭಾರವನ್ನು ಹೊತ್ತುಕೊಂಡು ಸುಮ್ಮನೆ ಬದುಕುವುದಕ್ಕಿಂತ, ಅದನ್ನು ಹಂಚಿಕೊಳ್ಳುವುದು ಸೂಕ್ತವೆಂದು ಈ ಪತ್ರ ಬರೆಯುತ್ತಿದ್ದೇನೆ.  ಬರೆದ ಈ ಪತ್ರ ನಿನಗೆ ಕೊಡಬಾರದು ಎಂದು ನನಗೆ ನಾನು ಮಾಡಿಕೊಂಡ ಆಣೆಯೊಂದಿಗೆ. ನಾ ನಿನ್ನ ನೋಡಿದ್ದು ಅದೇ ಮೊದಲ ಸಲವಲ್ಲ. ಹಾಗಾಗೀ ನನ್ನದು ಮೊದಲ ನೋಟದ ಪ್ರೀತಿ ಎನ್ನುವುದು ಸೂಕ್ತವಲ್ಲ.ಆ ಸುಂದರ ಶುಭ ದಿನದಂದು ಎದುರಿನಿಂದ ಫೋನಿನಲ್ಲಿ ಮಾತಾಡುತ್ತಾ ಬರುತಿದ್ದ ನಿನ್ನ್ ತೆಳುವಾದ ದೇಹಕ್ಕೆ ಅಪ್ಪಿಕೊಂಡ ಆ ಕಪ್ಪು ಸೀರೆ, ನಿನ್ನ್ ಹೊಳೆಯುವ ಕಣ್ಣುಗಳ ಕೊಂಚ ಮರೆಮಾಡಲು ನಿನ್ನ್ ಮೂಗಿನ ಮೇಲೆ ಗತ್ತಿನಿಂದ ಕುಳಿತ ಕನ್ನಡಕ, ಕೈಗೆ ಸುತ್ತಿದ ಲೆದರ್ ಬೆಲ್ಟಿನ ಬಂಗಾರ ಬಣ್ಣದ ಕೈ ಗಡಿಯಾರ, ಸುಮ್ಮನೆ ಬಾಚಿ ಬಿಟ್ಟ ನಿನ್ನ ಹೇರಳ ರಾಶಿ ಆಕಸ್ಮಿಕವಾಗಿನೋಡಿದ ಕ್ಷಣದಿಂದಲೇ ನನ್ನ ಹೊಟ್ಟೆಯಲ್ಲಿ ಚಿಟ್ಟೆ ಹಾರಿದ ಅನುಭವ.  ಆಮೇಲೆ ಶುರು ಆಯ್ತು ನೋಡು ಕದ್ದು, ಕಾಯ್ದು... ಮಿಂಚಿನಂಥ ನಿನ್ನ ನಗು, ಮಳೆಯಂಥ ನಿನ್ನ ಮಾತು, ಅಲೆಗಳಂಥ ನಿನ್ನ ನಡಿಗೆ ನೋಡುವ ಹುಚ್ಚು. ನಿನ್ನ ಕಣ್ಣಿಗೆ ಬೀಳಬೇಕೆಂಬ ಹಂಬಲ.  ನನಗನಿಸುತ್ತೆ ಆಗಲೆ ನನ್ನಲಿ ಈ ಹೇಳಿಕೊಳ್ಳದ ಅನಾಹುತಕಾರಿ ಪ್ರೀತೀ ಹುಟ್ಟಿದ್ದು ಮತ್ತೆ ಈ ಎಲ್ಲವೂ ನನ್ನನ್ನು ಆವರಿಸಿದಾಗ ಈಗ ಹಿಂದೆ ಸರಿಯೂದು ಅಸಾಧ್ಯ ಅನಿಸೂಕೆ ಶುರುವಾಗಿದ್ದು ಅಂತ.ಆದರೆ ನಂಗೊತ್ತು ಕ...

ಅವಳ ಸುಖಗಳು

 ಹೇ ಕಬೀರಾ, ನನ್ನ ತಪ್ಪುಗಳ ಎಣಿಸುವ ಮೊದಲು, ಗಮನಿಸಿ ನೋಡು.  ನನ್ನ ದುಃಖಗಳಲ್ಲಿ  ಅವಳ ಸುಖಗಳಿವೆ. - ಶಿವಾನಂದ್ ಸಾವಳಗಿಕರ್ @highlight

ಭಗವಂತ ನಾಚಿದ

 ಆತ ಬಡವ ಕೂಲಿಗಾರ,  ಭಕ್ತಿ ಉಳ್ಳವ. ತನ್ನ ಬೇಡಿಕೊಳ್ಳುವಾಗ  ಚಾಚಿದ ಕೈಗಳ ಗಾಯಗಳ ನೋಡಿ, ಭಗವಂತ ನಾಚಿದ. - ಶಿವಾನಂದ್ ಸಾವಳಗೀಕರ್ @highlight #everyone

ಬಾಳು ಬರಡು

 ಸಾವಿರ ಸಾವಿರ ಕನಸುಗಳ ಕಂಡೆ  ಆ ಕನಸುಗಳಲಿ  ನಾ ನೀನ್ನನ್ನೇ ಕಂಡೆ,  ಕನಸುಗಳು ಬೇರೆ ಬೇರೆ ಆದರು ಭಾವ ಒಂದೇ,  ನೀನ್ನ ಪ್ರಿತೀಸುವ ಈ ಜೀವದ ಪ್ರೀತಿ ಒಂದೇ . ಸೋತವನಿಗೆ ಗೆಲುವು ಬೇಕು ಸಾಯುವವನಿಗೆ ನೆಮ್ಮದಿ ಬೇಕು  ಎಲ್ಲಿಂದ ತರಲಿ ನಾ ಇವೆರಡು  ಮೊದಲಿಂದಲೂ ಈ ಬಾಳು ಬರಡು. ಬರೀ ಬರಡು. ಬರೀ ಬರಡು. - ಶಿವಾನಂದ್ ಸಾವಳಗಿಕರ್ @highlight

ಪ್ರಶ್ನೇ

 ಪ್ರಶ್ನೇ  ಟ್ರಾಫೀಕ್‌ ಸಿಗ್ನಲ್ಲಿನಲ್ಲಿ ನಿಂತು  ನಗುತಿರುವ ವೇಶ್ಯೆಯ  ಮುಖದ ಮೆಕಪ್ಪೀನ ಹಿಂದೆ  ಯಾವ ನೋವಿದೆಯೊ ಬಲ್ಲವರಾರು;  ಅವಳು ಹಚ್ಚಿಕೊಂಡಿರುವ  ಸೇಂಟಿನ ಘಮದ ಹಿಂದೆ ‌ ಎಷ್ಟು ನೀಟ್ಟುಸಿರುಗಳಿವೆಯೋ, ಅರಿತವರು ಯಾರು ? - ಶಿವಾನಂದ ಸಾವಳಗಿಕರ್ #everyone #follower

ನೀನೆಂದಿಗೂ ಜೀವಂತ

 ನೀ ನನ್ನ ಬಿಟ್ಟು ಹೋಗಿರುವೆ. ಎಲ್ಲಿ ತಲುಪಿರುವೆ? ನಿನ್ನ ನಗುವು ಇನ್ನೂ  ನನ್ನ ಕಣ್ಣ ಮುಂದೆ ಅರಳುತ್ತಿದೆ. ನಿನ್ನ ಧ್ವನಿ ಈ ಖಾಲಿ ಮನೆಯಲ್ಲಿ  ಇನ್ನು ಪ್ರತಿಧ್ವನಿಸುತ್ತಿದೆ. ನೀ ಪರಿಚಯಿಸಿದ ಪ್ರೀತಿಯ ಬೆಳಕೇ, ಇಂದು ಕತ್ತಲಲೀ ನನ್ನ ದಾರಿ ತೋರಿಸುತಿದೆ. ನಿನ್ನ ನೆನಪೇ ಉಸಿರಾಗಿ, ನನ್ನ ಬದುಕಿಗೆ ಇಂದು ಆಸರೆಯಾಗಿದೆ. ನೀ ಇರಬೇಕಿತ್ತು,  ಆದರೆ ಇಲ್ಲ… ತಡಿ ನೀನು ಎಲ್ಲಿರುವೆಯೋ  ಬರುವೇ ನಾನು ಅಲ್ಲಿ… ಅಲ್ಲಿಯತನಕ  ಈ ಉಸಿರಿನಲಿ,  ಈ ಮನದಲಿ, ನೀನೆಂದಿಗೂ ಜೀವಂತ! - ಶಿವಾನಂದ್ ಸಾವಳಗೀಕರ್ 

ಕ್ಷಮಿಸು ಗೆಳತಿ

 ಕ್ಷಮಿಸು ಗೆಳತಿ, ನಿನ್ನ್ ಆರಾಧಿಸಬಲ್ಲೇ ಹೊರತು ನಿನ್ನ್ ಪ್ರೀತಿಸಲಾರೆ. ಬಲ್ಲೆ ನಾನು, ನೀನು ಕೈಗೆಟುಗದ ನಕ್ಷತ್ರವೆಂದು. ಸತ್ಯವಿದು ನೀನೆಂದರೆ ನನಗಿಷ್ಟ,  ನಿನ್ನ ಸಂಪಿಗೆಯಂಥ ಮೂಗಿನ ಮೇಲೆ ಕುಳಿತ ಕನ್ನಡಕದೊಳಗಿನ ನಿನ್ನ ಕಣ್ಣುಗಳಿಷ್ಟ.  ಕೂಗಿ ಕರೆಯುವ ನಿನ್ನ ಕೋಗಿಲೆ ಧ್ವನಿ ಇಷ್ಟ. ಒದ್ದೆಯಾದ ತಲೆಗೂದಲ ನೀನು ಕಟ್ಟಿಕೊಳ್ಳುವ ಬಗೆ ಇಷ್ಟ. ನಿಜಾ ಹೇಳ್ಲಾ ನನ್ನ್ ಅದೃಷ್ಟಕ್ಕಿರದ, ಆದರೆ ನಿನ್ನ ಸ್ಪರ್ಶಕ್ಕೆ ಸಿಕ್ಕಿರುವ  ನಿನ್ನ ಆ ಕೈ ಗಡಿಯಾರ, ಕಾಲ ಬೆರಳ ಕಾಲುಂಗುರ,  ಕೊರಳ ಸುತ್ತಿರುವ ಚೈನು ಮತ್ತು ತಾಳಿ,  ಇವೆಲ್ಲ ಕಂಡರೆ ನನಗೆ ಹೊಟ್ಟೆಕಿಚ್ಚು.  ಆಗಲೇ ಗಾಯಗಳಾಗಿವೆ ಹೃದಯಕ್ಕೆ,  ದಯವಿಟ್ಟು ಉಪ್ಪು ಸವರಬೇಡ ಅವುಗಳಿಗೆ  ವಾರೆ ನೋಟದಿಂದ ನೋಡಿ ಮುಗುಳ್ನಕ್ಕು. ಸುಖವಾಗಿರು..... - ಶಿವಾನಂದ್ ಸಾವಳಗಿಕರ್