Posts

Showing posts from January, 2010

ಸತ್ಯ

ಅಂತು ನಾನು ಒಂದು ಸತ್ಯ ತಿಳಿದುಕೊಂಡೆ; ಪ್ರೀತಿಯ ಕೊನೆಯಲಿ ನೋವಿದೆ ಎಂಬುದ ಕಂಡುಕೊಂಡೆ .

ಮತ್ತೊಮ್ಮೆ

ಪತ್ರ ಇಲ್ಲ ಈಗ ಒಂದು ಉತ್ತರವೂ ಈಲ್ಲ ಅವಳೀಗೀಗ ನನ್ನ ನೆನಪು ಇರಲಿಕ್ಕಿಲ್ಲ ಅವಳಿಗಾಗ ಹದಿನಾರು ಮೇಲೆ ಯವನ್ನದ ಜೋರು ; ಎಲ್ಲೋ.. ಸಿಕ್ಕ ನೆನಪು ಮತ್ತೊಮ್ಮೆ ನಕ್ಕಂತೆ ಕನಸು

ನೀನೆಂದು ಬರುವೆ

ನನ್ನ ಕಲ್ಪನೆಯ ಕನ್ನಿಕೆಯೇ ನೀನೇಂದು ಸೀಗುವೆ ದೀಪವಾರಿಸಿ ಬಾಗಿಲ ತೆಗೆದು ಕಾದುಕುಳಿತಿರುವೆ ನೀನೇಂದು ಬರುವೆ, ಯುಗಗಳೇ ಕಳೆದವು ; ನೀ ಬರಲಿಲ್ಲವೇಕೆ ಚೆಲುವೆ. ಹಾಳುಬಿದ್ದ ಈ ಹೃದಯದ ಬಾಗಿಲಿಗೆ ಬಂದು ನೀನೇಂದು ನಗುವೇ. ಕನಸಲ್ಲೇ ನನ್ನ ಪ್ರೀತಿಸಿ ದಿನವೆಲ್ಲ ಕಾಯಿಸಿ ಸತಾಯಿಸಿ ಇನ್ನು ಬರಲಿಲ್ಲವೇಕೆ ? ನನ್ನ ಪ್ರಿತಿಯ ರುಜುವಾತಿಗೆ ನೀನಗೆ ಸಾಕ್ಷಿಗಳು ಬೇಕೇ ? ಸಾವಿಗೆ ನಾನೆಂದು ಹೆದರೋಲ್ಲ; ಹಾಗೆಂದು ನಾನೇನು ಸಾಯೊಲ್ಲ. ನನಗೆ ನಿನ್ನ ಪ್ರೀತಿ ಬೇಕು ನಿನ್ನ..ಪ್ರೀತಿಸಲು ನಾನು ಬದುಕಬೇಕು.

ನಿನ್ನ ನೆನಪು

ಹರಿಹರಿದು ತಿನ್ನುತ್ತಿದೆ ನಿನ್ನ ನೆನಪು ಹಸಿದ ರಣಹದ್ದಿನಂತೆ... ಕೊಕ್ಕು ಹೊಡೆಯುತ್ತಿದೆ ಮನದಾಳಕೆ, ನೋವಾಗುತ್ತಲಿದೆ; ರಕ್ತ ಸುರಿಯುತ್ತಿದೆ ಬಾ ಮಿಲನದ ಮುಲಾಮಾದರು ಹಚ್ಹು ಅನಿಸುತಿದೆ ಇನ್ನು ಬದುಕಲಾರೆ ಬಹಳ ಹೊತ್ತು.

ಬರೀ ಬರಡು ಬರಡು

ಸಾವಿರ ಸಾವಿರ ಕನಸುಗಳ ಕಂಡೆ ಆ ಕನಸುಗಳಲಿ ನಾ ನೀನ್ನನ್ನೇ ಕಂಡೆ, ಕನಸುಗಳು ಬೇರೆ ಬೇರೆ ಆದರು ಭಾವ ಒಂದೇ, ನೀನ್ನ ಪ್ರಿತೀಸುವ ಈ ಜೀವದ ಪ್ರೀತಿ ಒಂದೇ ... ಬೇಕಿಲ್ಲ ನನಗೆ ಪುನರ್ ಜನ್ಮ ಈ ಜೀವಕ್ಕೊಂದೆ ಬಯಕೆಯಮ್ಮ , ನಿನ್ನ ನಾ ಪ್ರಿತಿಸಬೇಕು ನಿನ್ನ ಮಡಿಲಲ್ಲಿ ನಾ ಮಲಗಬೇಕು , ಸೋತವನಿಗೆ ಗೆಲುವು ಬೇಕು ಸಾಯುವವನಿಗೆ ನೆಮ್ಮದಿ ಬೇಕು ಎಲ್ಲಿಂದ ತರಲಿ ನಾ ಇವೆರಡು ಮೊದಲಿನಿಂದಲೂ ಈ ಬಾಳು ಬರಡು ಬರೀ ಬರಡು ಬರೀ ಬರಡು *****ssavalgikar

ಅವಳಿಗಾಗಿ

ಮತ್ತೆ ಕನಸಲ್ಲಿ ಬಂದೆ ಏಕೆ ಹುಡಗಿ, ನೀನೆ ಒಂದು ಕನಸು, ಕನಸಲ್ಲಿ ನೀ ಹೇಗೆ ಬಂದೆ ಚೆಲುವೆ ? ಮಗು ನೀನಗೆ ಗೊತ್ತಾ ಕನಸುಗಲ್ಲಿ ಎರಡು ಥರ ಕನಸಿವೆ ಅಂತಾ, ಒಂದು ರಾತ್ರಿ ಕನಸು ಇನ್ನೊಂದು ಹಗಲು ಕನಸು.... ಹಗಲು ಕನಸು ನೀಜವಾದ ಅರ್ಥದಲ್ಲಿ ಕನಸಲ್ಲ ಕಲ್ಪನೆ,ಸಕ್ಕರೆಯಂಥದ್ದು ಬರಿ ಸಿಹಿಸಿಹಿ, ರಾತ್ರಿ ಕಂಡ ಕನಸು. ನಿಜವಾದ ಕನಸು ಅದೊಂದು ಅನ್ಫಾರ್ಚುನೇಟ್ ಜೇನಿನಂತಹುದು, ಸಕ್ಕರೆ ಮತ್ತು ಜೆನೀನ ನಡುವಿನ ವ್ಯತ್ಯಾಸ ನೀನಗೆ ಬಿಡಿಸಿ ಹೇಳಬೇಕಿಲ್ಲ ತಾನೇ